Tuesday, 28 March 2023

ಗರ್ಭಗುಡಿ

ಗರ್ಭಗುಡಿಯದು ದೇವರ ಆಲಯಸ್ಥಾನ

ಅಹುದೆ ಗರ್ಭವು ಅದಕ್ಕೆ ಸಮಾನ?


ಅಲ್ಲವೇ ಬ್ರಹ್ಮಾಂಡವಿದು ಜಗದಂಬೆಯ ಗರ್ಭ ಸಂಜಾತ?

ಅವಳ ಒಡಲ ಕಂದಮ್ಮಗಳ ಗುಡಿ ಸ್ವಂತ

ಹೊತ್ತು ಹೆತ್ತು ಜೀವ ಕೊಟ್ಟು ಜೀವಿಸು ಹೋಗು ಮಗುವೇ ಎಂದು ತ್ಯಜಿಸಿದಾತಳು

ಹರಸಿ ಕಲಿಸಿ ನಗಿಸಿ ಶಿಕ್ಷಿಸಿ ಕರ್ಮವ ಕಳೆವವಳು


ಎಂತು ಹೇಳಲಿ ಅವಳ ಗರ್ಭದ ಮಹಿಮೆಯ ?

ಅದೆಂತು ಹೇಳಲಿ ಗರ್ಭದ ಮಹಿಮೆಯ?


ಶಿಶುವ ಧರಿಸಿ ಜೀವವ ಕೊಟ್ಟು

ತನ್ನದೆಂದು ಬೆಳೆಸಿ ಅಪ್ಪಿ 

ಪ್ರೀತಿ ವಿಶ್ವಾಸಗಳ ಬಳ್ಳಿ ಹಬ್ಬಿಸಿ 

ಒಡಲ ರಕ್ತಮಾತ್ರವಲ್ಲ ಮಮತೆಯ ಧಾರೆಯೆರೆದು 

ಸಮಯ ಬಂದಾಗ ಬೀಳ್ಕೊಡುವಳು ಅದೆಂತೋ!!?

ಕೊಂಡಿ ಕಳಚುವಳೆಂತೋ?

ಆ ನೋವು ಸಹಿಸುವಳೆಂತೋ

ಕಣ್ಣೀರಲ್ಲಾ, ರಕ್ತ ಹರಿಸಿ ಸಮಾಧಾನ ತಂದು ಕೊಳ್ಳುವಳೇನೋ 


ಬೀಳ್ಕೊಡುಗೆಯೋ ಅದು ಭಗವತ್ಪಾದಗಳಿಗೆ ಅರ್ಪಣೆಯೋ

ತನ್ನ ಜೀವಾತ್ಮವೂ ಪರಮಾತ್ಮನ ಅಂಶವೋ 

ತಾಯಿಯಾಗಿ ಮರುಜನ್ಮವೋ ಅವಳ ಮೋಕ್ಷಕ್ಕೆ ದಾರಿಯೋ

ಆದಳು ಅವಳು ಅದೆಲ್ಲಾದಕ್ಕೂ ಧನ್ಯಳು


ಅಹುದು ಬ್ರಹ್ಮಾಂಡವಿದು ಜಗದಂಬೆಯ ಗರ್ಭ ಸಂಜಾತ

ಚೈತನ್ಯರೂಪದಲ್ಲಿಹುದು ಪಂಚಮಹಾಭೂತ

ಕಣ ಕಣದಲ್ಲಿರುವನು ಪರಮಾತ್ನನೇ ಅನಂತ

ಅಂತರಂಗದ ದೃಷ್ಟಿಯ ಅರಿವಿದು ಚಿತ್ತ 


ಅದೆಂತು ಬಣ್ಣಿಸಲಿ ಗರ್ಭದ ಕ್ಷಮತೆಯ

ಗರ್ಭವು ಗರ್ಭಗುಡಿಯಾದ ಬಗೆಯ 

2 comments:

  1. 🙏🙏 no words..just deep contemplation

    ReplyDelete
  2. Excellently penned. Only a new mother can contemplate like this. 💐💐💐❤

    ReplyDelete